ಫೆಲ್ಪ್ಸ್, ವಿಲಿಯಮ್ ಲೈಯನ್
	1865-1943, ಅಮೆರಿಕದ ವಿದ್ವಾಂಸ ಮತ್ತು ವಿಮರ್ಶಕ. ಹುಟ್ಟಿದ್ದು ಕನೆಕ್ಟಿಕಟ್‍ನ ನ್ಯೂ ಹೆವನ್‍ನಲ್ಲಿ. ಯಾಲ್ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯಗಳಲ್ಲಿ ಈತನ ವಿದ್ಯಾಭ್ಯಾಸ ನಡೆಯಿತು. 1892ರಲ್ಲಿ ಯಾಲ್ ವಿಶ್ವವಿದ್ಯಾಲಯದ ಅಧ್ಯಾಪಕವರ್ಗಕ್ಕೆ ಸೇರಿದ ಈತ 1901ರಲ್ಲಿ ಅಲ್ಲಿಯೆ ಇಂಗ್ಲಿಷ್ ಸಾಹಿತ್ಯದ ಪ್ರಾಧ್ಯಾಪಕನಾದ. ಪ್ರತಿಭಾವಂತನೂ ಜನಪ್ರಿಯ ಪ್ರಾಧ್ಯಾಪಕನೂ ಆದ ಈತ ಸಮಕಾಲೀನ ಲೇಖಕರನ್ನು ಕುರಿತಂತೆ ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ಭಾಷಣ ಮಾಲಿಕೆಯನ್ನು ಆರಂಭಿಸಿದವರಲ್ಲಿ ಮೊದಲಿಗ.

	ದಿ ಬಿಗಿನಿಂಗ್ಸ್ ಆಫ್ ದಿ ಇಂಗ್ಲಿಷ್ ರೊಮ್ಯಾಂಟಿಕ್ ಮೂವ್‍ಮೆಂಟ್ (1893), ಎಸ್ಸೇಸ್ ಆನ್ ಮಾಡ್ರನ್ ನಾವೆಲಿಸ್ಟ್ಸ್ (1910), ದಿ ಅಡ್ವಾನ್ಸ್ ಆಫ್ ದಿ ಇಂಗ್ಲಿಷ್ ನಾವೆಲ್ (1916), ದಿ ಅಡ್ವಾನ್ಸ್ ಆಫ್ ಇಂಗ್ಲಿಷ್ ಪೊಯೆಟ್ರಿ (1918), ಹಾಗೂ ದಿ ಟ್ವೆಂಟಿಯೆತ್ ಸೆಂಚುರಿ ತಿಯೇಟರ್ (1918),-ಇವು ಈತನ ಪ್ರಸಿದ್ಧ ಕೃತಿಗಳು.

	1939ರಲ್ಲಿ ಈತ ತನ್ನ ಆತ್ಮಕಥೆಯನ್ನೂ ಹಾಗೂ ಪತ್ರಗಳನ್ನು ಪ್ರಕಟಿಸಿದ.
(ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ